ಬೆಲೆ ಏರಿಕೆಯನ್ನು ಖಂಡಿಸಿ ಸಿಪಿಎಂ, ಸಿಪಿಐ, ಎಐಎಫ್ಬಿ. ಆರ್ಎಸ್ಪಿ, ಎಐಎಡಿಎಂಕೆ, ಬಿಜು ಜನತಾದಳ, ಟಿಡಿಪಿ. ಲೋಕಜನ ಶಕ್ತಿ ಪಾರ್ಟಿ, ರಾಷ್ಟ್ರೀಯ ಜನತಾದಳ. ಜನತಾದಳ (ಜಾತ್ಯತೀತ), ಸಮಾಜವಾದಿ ಪಕ್ಷ ಹಾಗೂ ಐಎನ್ಎಲ್ಡಿ ಸೇರಿ ಜಾತ್ಯತೀತ ತಳಹದಿಯ ಒಟ್ಟು ಹದಿಮೂರು ಪಕ್ಷಗಳು ಆಹಾರ ಸಾಮಾಗ್ರಿಗಳು ಹಾಗೂ ದಿನ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಏಪ್ರಿಲ್ 27ರಂದು ರಾಷ್ಟ್ರಮಟ್ಟದ ಹರತಾಳಕ್ಕೆ ಕರೆ ನೀಡಿವೆ. ಕಳೆದ ಆರು ತಿಂಗಳಿನಿಂದ ಒಂದೇ ಸಮನಾಗಿ ಹೆಚ್ಚುತ್ತಿರುವ ಬೆಲೆ ಏರಿಕೆಯ ವಿರುದ್ಧ ನಡೆಯುತ್ತಿರುವ ಚಳವಳಿಯ ಅತ್ಯಂತ ಮಹತ್ವದ ಮೆಟ್ಟಿಲು ಇದು.
ಕೇಂದ್ರ ಬಜೆಟ್ನಲ್ಲಿ ಅನುದಾನವ ಬೇಡಿಕೆಯನ್ನು ಕೈಗೊಳ್ಳುವ ಹಾಗೂ ಹಣಕಾಸು ಮಸೂದೆಯನ್ನು ಏಪ್ರಿಲ್ ಕೊನೆ ವಾರದಲ್ಲಿ ಸಂಸತ್ನಲ್ಲಿ ಮಂಡಿಸಲಾಗುವುದೆಂದು ನಿರೀಕ್ಷಿಸಲಾಗಿರುವ ಕಾಲಕ್ಕೆ ಸರಿಯಾಗಿ ಅಖಿಲ ಭಾರತ ಮಟ್ಟದ ಹರತಾಳಕ್ಕೆ ಕರೆ ನೀಡಲಾಗಿದೆ. ಕಚ್ಚಾ ತೈಲದ ಮೇಲಿನ ತೆರಿಗೆ ಹೆಚ್ಚಳ, ಪೆಟ್ರೋಲ್, ಡೀಸೆಲ್ ಹಾಗೂ ರಸಗೊಬ್ಬರಗಳ ಮೇಲಿನ ಬೆಲೆ ಹೆಚ್ಚಿಸಲು ಕೇಂದ್ರ ಸರ್ಕಾರವು ಅನುದಾನ ಕಡಿತಗೊಳಿಸುವ ಸಲುವಾಗಿ ಬಜೆಟ್ ತ್ದಿದುಪಡಿ ಹಾಗೂ ಹಣಕಾಸು ಮಸೂದೆ ತರಲು ಮುಂದಾದ ಹೊತ್ತಿನಲ್ಲೇ ಹದಿಮೂರು ಪಕ್ಷಗಳು ಹೋರಾಟಕ್ಕೆ ಇಳಿಯಲು ನಿರ್ಧರಿಸಿದವು.
ಕಚ್ಚಾತೈಲದ ಮೇಲೆ ಹೆಚ್ಚಿಸಿರುವ ಸುಂಕ, ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ, ಯೂರಿಯಾ ಬೆಲೆ ಹಚ್ಚಳ,ರಾಸಾಯನಿಕ ಗೊಬ್ಬರ ಬೆಲೆ ಹೆಚ್ಚಳವನ್ನು ವಾಪಸ್ ತೆಗೆದುಕೊಳ್ಳಲು ಹಾಗೂ ಬೆಲೆ ಏರಿಕೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ನಡೆಸಿದ ಈ ಹರತಾಳದಿಂದ ಸಂಸತ್ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ದನಿ ಇನ್ನು ಹೆಚ್ಚಾಗಲಿದೆ.
ಬೆಲೆ ಏರಿಕೆ ಹಾಗೂ ಇನ್ನಿತರ ಬೇಡಿಕೆಗಳನ್ನು ಇಟ್ಟುಕೊಂಡು ಮಾರ್ಚ್ 12ರಂದು ಪ್ರತಿಭಟನಾ ರ್ಯಾಲಿಯನ್ನು ಎಡ ಪಕ್ಷಗಳು ನಡೆಸಿದ್ದವು. ಈ ರ್ಯಾಲಿಯಲ್ಲಿ ಏಪ್ರಿಲ್ 8ರಂದು ಪಿಕೆಟಿಂಗ್ ಹಾಗೂ ನ್ಯಾಯಾಂಗ ಬಂಧನ ಚಳವಳಿ ನಡೆಸಲು ಕರೆ ನೀಡಲಾಗಿತ್ತು. ದೇಶಾದಾದ್ಯಂತ ಈ ಚಳವಳಿಯಲ್ಲಿ ಸರಿ ಸಮಾರು 25 ಲಕ್ಷ ಜನರು ಭಾಗವಹಿಸಿದ್ದರು. ಎಡ ಪಕ್ಷಗಳ ಕರೆಗೆ ಅಭೂತಪೂರ್ವವಾಗಿ ಸ್ಪಂದಿಸಿದ ಸಾಮಾನ್ಯ ಜನತೆ ಬಂದ್ ವೇಳೆ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.ಕೆಲವು ತಿಂಗಳಿಂದ ಹಲವು ರಾಜ್ಯಗಳಲ್ಲಿ ಬೇರೆ ಬೇರೆ ವಿರೋಧ ಪಕ್ಷಗಳು ಕೂಡ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿವೆ.
ಆದರೂ ಯುಪಿಎ ಸರ್ಕಾರವು, ಜನತೆಯ ಮೇಲೆ ಹೇರಿರುವ ಬೆಲೆ ಏರಿಕೆಯನ್ನು ಕಡಿಮೆ ಮಾಡುವ ಕೆಲಸಕ್ಕೆ ಮುಂದಾಗಿಲ್ಲ.ಪೆಟ್ರೋಲ್, ಡೀಸೆಲ್ ಬೆಲೆಯನ್ನು ಯುಪಿಎ ಸರ್ಕಾರ ಮೂರು ರೂಪಾಯಿ ಹೆಚ್ಚಿಸುವ ಮೂಲಕ ತನ್ನ ಕಲ್ಲೆದೆಯನ್ನು ತೋರಿಸಿದೆ.ಬೆಲೆ ಏರಿಕೆ ಸಂಬಂಧ ಚರ್ಚಿಸಲು ಫೆಬ್ರುವರಿ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಮುಖ್ಯಮಂತ್ರಿಗಳ ಸಭೆಯನ್ನು ಕರೆದಿತ್ತು. ಸಭೆಯಲ್ಲಿ ಬೆಲೆ ಏರಿಕೆಗೆ ಕಡಿವಾಣ ಹಾಕಲು ತೆಗೆದುಕೊಳ್ಳ ಬೇಕಾದ ಕ್ರಮಗಳನ್ನು ಪರಿಶೀಲಿಸಲು ಮುಖ್ಯಮಂತ್ರಿ ಗಳನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಯಿತು. ಆನಂತರ ಎರಡು ತಿಂಗಳ ನಂತರ ಏಪ್ರಿಲ್ 8ರಂದು ಪ್ರಧಾನಮಂತ್ರಿ ಹಾಗೂ ಇನ್ನಿತರ ಕೇಂದ್ರ ಸಚಿವರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿಗಳ ಸಮಿತಿಯು ಸಭೆಯೂ ಸೇರಿತ್ತು. ಈ ವೇಳೆ ಪ್ರಧಾನಿ ಹಾಗೂ ಹಣಕಾಸು ಸಚಿವರು ಭಾಷಣವು ಬೆಲೆ ಏರಿಕೆ ಕಡಿವಾಣಕ್ಕೆ ಸಂಬಂಧಿಸಿದಂತೆ ಅವರುಗಳು ಸಂಪೂರ್ಣ ಆತ್ಮತೃಪ್ತಿ ಹೊಂದಿದಂತೆ ತೋರಿಸಿತು. ಮತ್ತೇ ಮೂರು ಉಪ ಸಮಿತಿಗಳನ್ನು ರಚಿಸುವುದಷ್ಟೇ ಈ ಅಧಿಕಾರಿಶಾಹಿ ಸಭೆಯ ಫಲಿತಾಂಶವಾಗಿತ್ತು.
ಕೇಂದ್ರ ವಾರ್ತ ಮತ್ತು ಪ್ರಚಾರ ಖಾತೆ ಸಚಿವರು ಆಹಾರ ಪದಾರ್ಥಗಳ ಬೆಲೆ ಇಳಿಕೆಯಾಗಿದೆ ಎಂದು ಪ್ರಕಟಿಸಿದರು.ಆದಾಗ್ಯೂ, ಮರುದಿನವೇ ಎಡ ಪಕ್ಷಗಳು ಹಮ್ಮಿಕೊಂಡಿದ್ದ ಜೈಲ್ ಭರೋ ಚಳವಳಿ ವೇಳೆ ಆಹಾರ ಪದಾರ್ಥಗಳ ಬೆಲೆಯಲ್ಲಿ ಹೆಚ್ಚಳವಾಗಿರುವ ಹೊಸ ಅಂಕಿ ಅಂಶಗಳನ್ನು ಎಡ ಪಕ್ಷಗಳು ಬಹಿರಂಗಗೊಳಿಸಿದವು. ಮಾರ್ಚ್ 27ರ ಅಂತ್ಯಕ್ಕೆ ಆಹಾರ ದ ಬೇಲೆಯ ಹಣದುಬ್ಬರವು ಶೇ 17.7ರಷ್ಟು ಹೆಚ್ಚಳವಾಗಿತ್ತು. ಕಳೆದ ವಾರಕ್ಕೆ ಹೋಲಿಸಿದರೆ ಶೇ. 1 ಅಂಶವು ಹೆಚ್ಚಾಗಿತ್ತು.
ಬೆಲೆ ಏರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವು ಆಹಾರ ಪದಾರ್ಥಗಳ ಭವಿಷ್ಯತ್ ವ್ಯಾಪಾರ(ಪಾಯಿದಾ ವ್ಯಾಪಾರ)ದ ಮೇಲೆ ನಿರ್ಬಂಧ ಸೇರಿದಂತೆ ಇನ್ನಿತರ ಅಗತ್ಯ ಕ್ರಮ ಕೈಗೊಳ್ಳಲು ನಿರಾಕರಿಸಿತು. ಕೇಂದ್ರ ಸರ್ಕಾರ ತನ್ನ ಆಹಾರ ಗೋದಾಮಿನಲ್ಲಿ ಆಪತ್ಕಾಲದ ಸಂಗ್ರಹದ ನಿಗದಿತ ಮಟ್ಟವಾದ 200 ಲಕ್ಷ ಟನ್ಗಳಿಗಿಂತ ತೀರಾ ಹೆಚ್ಚಾಗಿ ಅಂದರೆ 474.65 ಲಕ್ಷ ಟನ್ ಆಹಾರವನ್ನು ಸಂಗ್ರಹಿಸಿಟ್ಟಿದ್ದು, ಹೆಚ್ಚುವರಿ ಆಹಾರ ಧಾನ್ಯವನ್ನು ಬಿಡುಗಡೆ ಮಾಡಲೂ ಇಲ್ಲ. ಬದಲಿಗೆ ಸಾರ್ವಜನಿಕ ಪಡಿತರ ವಿತರಣೆ ಸಾಧ್ಯವಿಲ್ಲದಂತೆ ಕೆಜಿ ಅಕ್ಕಿಗೆ 15 ರೂಪಾಯಿಯಂತೆ ರಾಜ್ಯಗಳಿಗೆ ನೀಡುತ್ತೇನೆನ್ನುವ ಕೇಂದ್ರ ಸರ್ಕಾರದ ಕ್ರಮ ಪ್ರಜಾಪ್ರಭುತ್ವವನ್ನು ಅಣಕಿಸಿದಂತಾಗಿದೆ.
ಬಜೆಟ್ ಅಧಿವೇಶನ ಧಿಕ್ಕರಿಸುವ ಜಾತ್ಯತೀತ ಪಕ್ಷಗಳ ನಡೆ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ನೀಡುವಂತೆ ಮಾಡಿತು.ಕಾಂಗ್ರೆಸ್ ಪಕ್ಷದ ವಕ್ತಾರರು ಬೆಲೆ ಏರಿಕೆ ವಿಚಾರದಲ್ಲಿ ಕೋಮುವಾದಿ ಪಕ್ಷವಾದ ಬಿಜೆಪಿ ಜೊತೆ ಜಾತ್ಯತೀತ ಪಕ್ಷಗಳು ಕೈಜೋಡಿಸಿವೆ ಎಂದು ಆರೋಪ ಹೊರಿಸಿದರು. ಆದರೆ ಜನತೆ ಇಂಥ ಆರೋಪಗಳಿಗೆ ಬೆಲೆ ಕೊಡುವುದಿಲ್ಲ. ಬೆಲೆ ಹೆಚ್ಚಳ ಜನರನ್ನು ಬಾಧಿಸುತ್ತಿರುವ ಅತ್ಯಂತ ಗಂಭೀರ ಸಮಸ್ಯೆಯಾಗಿದೆ.ಸರ್ಕಾರದ ತಪ್ಪು ನೀತಿಗಳಿಂದಾಗಿ ಸೃಷ್ಟಿಯಾಗಿರುವ ಹಣ ದುಬ್ಬರ ಹಾಗೂ ಆಹಾರ ಪದಾರ್ಥಗಳ ಬೆಲೆ ಏರಿಕೆಯನ್ನು ಎಡ ಪಕ್ಷಗಳು ಹಾಗೂ ಇತರೆ ಜಾತ್ಯತೀತ ಪಕ್ಷಗಳು ವಿರೋಧಿಸದೇ ಹೋಗಿದ್ದರೆ ಅವುಗಳು ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ಸೋತಂತ್ತಾಗುತ್ತಿತ್ತು.
ಸಿಪಿಎಂಗೆ ಈ ಬಗ್ಗೆ ಕಾಳಜಿ ಇದ್ದು, ಸಂಸತ್ ಒಳಗೂ ಹೋರಾಟ ನಡೆಸಲಿದೆ. ಆದರೆ ಇದರರ್ಥ ಸರ್ಕಾರವನ್ನು ಬೀಳಿಸುವುದಲ್ಲ.ಇದು ಆಡಳಿತ ಪಕ್ಷವನ್ನು ಒಂಟಿಯಾಗಿಸುವ ರಾಜಕೀಯ ತಂತ್ರವಾಗಿದೆ. ಅಲ್ಲದೇ ಈ ಹೋರಾಟವನ್ನು ಸರ್ಕಾರದ ಪ್ರತಿಗಾಮಿ ನೀತಿಗಳನ್ನು ಹಿಮ್ಮೆಟ್ಟಿಸುವವರೆಗೂ ಕೊಂಡೂಯ್ಯಲಾಗುವುದು.ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸುವುದನ್ನು ಬಿಟ್ಟರೆ ಬೇರೆ ಯಾವುದೇ ಮಾರ್ಗವಿಲ್ಲ. ಇದು ಬೆಲೆ ಏರಿಕೆಗೆ ಕಡಿವಾಣಕ್ಕೆ ಕ್ರಮ ಕೈಗೊಳ್ಳಲು ಹಾಗೂ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ ಬಲಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲಿದೆ.
ಬೆಲೆ ಹೆಚ್ಚಳ, ಪಡಿತರ ವ್ಯವಸ್ಥೆ ಬಲಪಡಿಸುವುದು, ಆಹಾರ ಭದ್ರತೆ ಕುರಿತು 2009ರ ಆಗಸ್ಟ್ ತಿಂಗಳಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮಾವೇಶದಿಂದ ಇಲ್ಲಿವರೆಗೂ ಎಡ ಪಕ್ಷಗಳು ಇತರೆ ಜಾತ್ಯತೀತ ಪಕ್ಷಗಳ ಜೊತೆ ಸೇರಿ ಈ ವಿಷಯಗಳ ಮೇಲೆ ಚಳವಳಿ ರೂಪಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಜನವರಿ 2010ರವರೆಗೂ ಎಡ ಪಕ್ಷಗಳು ರಾಜ್ಯ ಮಟ್ಟದಲ್ಲಿ ಸಮಾವೇಶಗಳು, ರ್ಯಾಲಿಗಳನ್ನು ನಡೆಸಿವೆ. ಇದನ್ನು ಅನುಸರಿಸಿ ಮಾರ್ಚ್ 12 ರಂದು ರ್ಯಾಲಿ ಹಾಗೂ ಏಪ್ರಿಲ್ 8ರ ನ್ಯಾಯಾಂಗ ಬಂಧನ ಚಳವಳಿ ಹಮ್ಮಿಕೊಳ್ಳಲಾಗಿತ್ತು.
ಇದರ ಭಾಗವಾಗಿ ಏಪ್ರಿಲ್ 27ರಂದು ಕರೆ ನೀಡಿರುವ ಹರತಾಳವನ್ನು ಯಶಸ್ವಿಗೊಳಿಸಲು ಪಕ್ಷ ಸಂಪೂರ್ಣವಾಗಿ ಸಜ್ಜಾಗಬೇಕು.ಏಪ್ರಿಲ್ 8ರಂದು ನಡೆಸಲಾದ ಚಳುವಳಿಯ ಸ್ಫೂರ್ತಿಯನ್ನು ಚಳವಳಿಯ ನೆನಪನ್ನು ಏಪ್ರಿಲ್ 27ರವರೆಗೂ ಕೊಂಡೊಯ್ಯಬೇಕು.ಹರತಾಳಕ್ಕೆ ಇನ್ನು ಕೆಲವೇ ದಿನಗಳಿದ್ದು, ಪಕ್ಷ ಜನರ ನಡುವೆ ಹೋಗಿ ಹರತಾಳದ ಸಂದೇಶವನ್ನು ಮುಟ್ಟಿಸುವ ಕೆಲಸದಲ್ಲಿ ತೊಡಗಬೇಕು. ಕಾಂಗ್ರೆಸ್ ಸಕರ್ಾರಕ್ಕೆ ಅತ್ಯಂತ ಖಚಿತವಾದ ಎಚ್ಚರಿಕೆ ನೀಡಲು ಹಾಗೂ ದೊಡ್ಡ ಮಟ್ಟದ ಹರತಾಳ ಸಂಘಟಿಸಲು ಇತರೆ ಜಾತ್ಯತೀತ ಪಕ್ಷಗಳೊಂದಿಗೆ ಸೇರಿ ಕೆಲಸ ಮಾಡಬೇಕು. 0